Kannada kotyadipathi live show
Kbc kannada wiki...
ಕನ್ನಡದ ಕೋಟ್ಯಧಿಪತಿ
ಕನ್ನಡದ ಕೋಟ್ಯಧಿಪತಿಭಾರತೀಯಕನ್ನಡ ಭಾಷೆಯ ರಸಪ್ರಶ್ನೆ ಆಟದ ಕಾರ್ಯಕ್ರಮವಾಗಿದ್ದು, ಇದನ್ನು ಪುನೀತ್ ರಾಜ್‌ಕುಮಾರ್ ನಿರೂಪಣೆ ಮಾಡಿದ್ದಾರೆ. ಇದು ಅಂತರರಾಷ್ಟ್ರೀಯ ಖ್ಯಾತಿಯ ಸೋನಿ ಪಿಕ್ಚರ್ಸ್ ಟೆಲಿವಿಷನ್- ಪ್ರಸಿದ್ಧ ಗೇಮ್ ಶೋ 'ಹು ವಾಂಟ್ಸ್ ಟು ಬಿ ಅ ಮಿಲಿಯನೇರ್ (Who Wants to be a Millionaire?)' ನ ಅಧಿಕೃತ ಕನ್ನಡ ಭಾಷಾ ರೂಪಾಂತರವಾಗಿದೆ.
Kotyadhipati
ಈ ಕಾರ್ಯಕ್ರಮದ ಮೊದಲ ಮೂರು ಸೀಸನ್ಗಳು ಸ್ಟಾರ್ ಸುವರ್ಣದಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಆದರೆ ನಾಲ್ಕನೇ ಸೀಸನ್ ಜೂನ್ 23, 2019 ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಯಿತು.[೧]
ಹಿನ್ನೆಲೆ
[ಬದಲಾಯಿಸಿ]ರಿಯಾಲಿಟಿ ಶೋಗಳಲ್ಲಿ ಹೊಸ ಆಲೋಚನೆಗಳ ಸರಣಿಯ ನಂತರ ಸ್ಟಾರ್ ನೆಟ್‌ವರ್ಕ್‌ನ ಕನ್ನಡದ ಸಾಮಾನ್ಯ ಮನರಂಜನಾ ಚಾನೆಲ್ ಏಷ್ಯನೆಟ್ ಸುವರ್ಣ ಮತ್ತೊಂದು ಅಮೋಘ ರಿಯಾಲಿಟಿ ಶೋ ಅನ್ನು ಘೋಷಿಸಿತು - ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾಕರೋಡಪತಿ (ಕೆಬಿಸಿ) ಆಧಾರಿತ ಕನ್ನಡದ ಕೋಟ್ಯಾಧಿಪತಿ .
ಸಾಮಾನ್ಯ ಕನ್ನಡಿಗರನ್ನು ಉದ್ದೇಶಿಸಿರುವ ಈ ಕಾರ್ಯಕ್ರಮವು ಕನ್ನಡ ದೂರದರ್ಶನದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದು, ಇದರಲ್ಲಿ ಗೆದ್ದವರಿಗೆ 1 ಕೋಟಿ ರೂ ಬಹುಮಾನ ನೀಡಲಾಗುತ್ತದೆ. ಕನ್ನಡ ಕೋಟ್ಯಾಧಿಪತಿಯ ಆವೃತ್ತಿಯ ಸ್ವರೂಪ ಮತ್ತು ನಿಯಮಗಳು ಕೆಬಿಸಿಯ ಮೊದಲ ಆವೃತ್ತಿಯಂತೆಯೇ ಇರುತ್ತದೆ.
ಕಾರ್ಯಕ್ರಮದ ಮೊದಲೆರಡು ಸೀಸನ್ ಗಳನ್ನು ನಟ ಪುನೀತ್ ರಾಜ್‌ಕುಮಾರ್ ನಿರೂಪಿಸಿದ್ದರು . ದೂರದರ್ಶನದಲ್ಲಿ ಮೊದಲ ಬಾರಿಗೆ ನಿರೂಪಕರಾಗಿ ಪಾದಾರ್ಪಣೆ ಮಾಡಿದ ಪ